Asianet Suvarna News Asianet Suvarna News

ಈ ಬಾರಿಯ ಐಪಿಎಲ್‌ನಲ್ಲಿ ಸಿಕ್ಸರ್‌ಗಳ ಸುರಿಮಳೆ..! ಅತಿಹೆಚ್ಚು ಸಿಕ್ಸರ್ ಬಾರಿಸಿದ್ದು ಯಾರು?

ಟಿ20 ಕ್ರಿಕೆಟ್, ಪಕ್ಕಾ ಬ್ಯಾಟರ್‌ಗಳ ಫಾರ್ಮೆಟ್. ಇಲ್ಲಿ ವಿಕೆಟ್ ಬೇಟೆಯಾಡೋ ಬೌಲರ್ಗಳಿಗಿಂತ, ರನ್ ಬೇಟೆಯಾಡೋ ಬ್ಯಾಟರ್‌ಗಳಿಗೆ ಡಿಮ್ಯಾಂಡ್ ಜಾಸ್ತಿ. ಅಲ್ಲದೇ, ಎಷ್ಟೊತ್ತು ಕ್ರೀಸ್ನಲ್ಲಿದ್ದ ಅನ್ನೋದಕ್ಕಿಂತ, ಸ್ಟ್ರೈಕ್ರೇಟ್ ಎಷ್ಟು ಅನ್ನೋದು ಮುಖ್ಯ

All time highest sixes record in this IPL 2024 Season kvn
Author
First Published May 17, 2024, 3:32 PM IST

ಬೆಂಗಳೂರು: ಟಿ20 ಕ್ರಿಕೆಟ್ ಅಂದ್ರೇನೆ ಸಿಕ್ಸರ್‌ಗಳ ಸುರಿಮಳೆ. ಆದ್ರೆ, ಈ ಸಲದ ಐಪಿಎಲ್‌ನಲ್ಲಿ ಈವರೆಗೆ ಎಷ್ಟು ಸಿಕ್ಸ್ ದಾಖಲಾಗಿವೆ. ಅತಿಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ ಯಾರ ಹೆಸರಿನಲ್ಲಿದೆ. ಯಾರ್ಯಾರು ಎಷ್ಟು ಸಿಕ್ಸರ್ ಬಾರಿಸಿದ್ದಾರೆ ಅನ್ನೋದು ನಿಮಗೆ ಗೊತ್ತಾ..? ಹಾಗಾದ್ರೆ ಈ ಸ್ಟೋರಿ ನೋಡಿ..!

ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಸಿಕ್ಸರ್ಸ್ ದಾಖಲು..! 

ಟಿ20 ಕ್ರಿಕೆಟ್, ಪಕ್ಕಾ ಬ್ಯಾಟರ್‌ಗಳ ಫಾರ್ಮೆಟ್. ಇಲ್ಲಿ ವಿಕೆಟ್ ಬೇಟೆಯಾಡೋ ಬೌಲರ್ಗಳಿಗಿಂತ, ರನ್ ಬೇಟೆಯಾಡೋ ಬ್ಯಾಟರ್‌ಗಳಿಗೆ ಡಿಮ್ಯಾಂಡ್ ಜಾಸ್ತಿ. ಅಲ್ಲದೇ, ಎಷ್ಟೊತ್ತು ಕ್ರೀಸ್ನಲ್ಲಿದ್ದ ಅನ್ನೋದಕ್ಕಿಂತ, ಸ್ಟ್ರೈಕ್ರೇಟ್ ಎಷ್ಟು ಅನ್ನೋದು ಮುಖ್ಯ. ಈ ಬಾರಿಯ IPLನಲ್ಲಿ ಕೆಲ ಬ್ಯಾಟರ್ಸ್ ಭಯಾನಕ ಸ್ಟ್ರೈಕ್ ರೇಟ್ ಮೂಲಕ ಅಬ್ಬರಿಸ್ತಿದ್ದಾರೆ. ಇದ್ರಿಂದ ಸಿಕ್ಸರ್ಗಳ ಲೆಕ್ಕಾಚಾರದಲ್ಲಿ IPLನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. 

ಬೆಂಗಳೂರಿನಲ್ಲಿ ಧೋನಿಗೆ ಲಾಸ್ಟ್ ಮ್ಯಾಚ್; ಮಹಿ ಆಟ ನೋಡಲು ಭರ್ತಿಯಾಗಲಿದೆ ಚಿನ್ನಸ್ವಾಮಿ ಸ್ಟೇಡಿಯಂ!

ಯೆಸ್, IPL ಚರಿತ್ರೆಯಲ್ಲೇ ಅತ್ಯಧಿಕ ಸಿಕ್ಸರ್ಗಳು ದಾಖಲಾದ ಸೀಸನ್ ಅನ್ನೋ ದಾಖಲೆಗೆ ಸೀಸನ್ 17 ಐಪಿಎಲ್ ಪಾತ್ರವಾಗಿದೆ. ಅಲ್ಲದೇ, ಈ ಬಾರಿ ಅತ್ಯಂತ ವೇಗವಾಗಿ ಸಾವಿರ ಸಿಕ್ಸರ್‌ಗಳು ಹರಿದು ಬಂದಿವೆ. 2023ರಲ್ಲಿ 67 ಪಂದ್ಯಗಳಲ್ಲಿ ಸಾವಿರ ಸಿಕ್ಸರ್‌ಗಳು ರೆಕಾರ್ಡ್ ಅಗಿದ್ವು. ಆದ್ರೆ, ಈ ಬಾರಿ ಬ್ಯಾಟರ್ಸ್, 57 ಪಂದ್ಯಗಳಲ್ಲೇ ಸಾವಿರ ಸಿಕ್ಸರ್ ಬಾರಿಸಿದ್ದಾರೆ. 

64 ಪಂದ್ಯಗಳಲ್ಲೇ ಹಳೆಯ ದಾಖಲೆ ಉಡೀಸ್..!

ಎಸೆತಗಳ ಲಕ್ಕಾಚಾರದಲ್ಲಿ ಹೇಳೋದಾದ್ರೆ, ಕಳೆದ ಸೀಸನ್‌ನಲ್ಲಿ 15,391 ಎಸೆತಗಳಲ್ಲಿ ಸಾವಿರ ಸಿಕ್ಸ್ ದಾಖಲಾಗಿದ್ವು. ಆದ್ರೆ, ಈ ಬಾರಿ 13,079 ಎಸೆತಗಳಲ್ಲೇ 1,000 ಸಿಕ್ಸರ್ಗಳು  ದಾಖಲಾಗಿವೆ. ಇನ್ನು 2023ರಲ್ಲಿ 74 ಮ್ಯಾಚ್ಗಳ ನಂತರ 1,124 ಸಿಕ್ಸರ್ಗಳು ಸಿಡಿದಿದ್ವು. ಈ ಸಲ 64 ಪಂದ್ಯಗಳ ನಂತರ ಸಿಕ್ಸರ್ಗಳ ಸಂಖ್ಯೆ 1,125 ದಾಟಿದೆ. 

ಇನ್ನು ಈ IPLನಲ್ಲಿ ಅತಿಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟರ್ ಅಂದ್ರೆ ಅದು ಅಭಿಷೇಕ್ ಶರ್ಮಾ. ಸನ್‌ರೈಸರ್ಸ್ ಹೈದರಾಬಾದ್ ಪರ ಆಡ್ತಿರೋ ಅಭಿಷೇಕ್, ಈವರೆಗೂ 35 ಸಿಕ್ಸ್ ಬಾರಿಸಿದ್ದಾರೆ. ಇನ್ನು ಅಭಿಷೇಕ್ ಶರ್ಮಾ ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದು, ಕೊಹ್ಲಿ  13 ಪಂದ್ಯಗಳಿಂದ 33 ಸಿಕ್ಸ್ ಸಿಡಿಸಿದ್ದಾರೆ. 

ಕೊಹ್ಲಿ ನಂತರ  32 ಸಿಕ್ಸ್ ಬಾರಿಸೋ ಸುನಿಲ್ ನರೈನ್, 31 ಸಿಕ್ಸ್ಗಳಿಂದ ಟ್ರಾವಿಸ್ ಹೆಡ್, 31 ಸಿಕ್ಸ್ ಸಿಡಿಸಿರೋ ರಿಯಾನ್ ಪರಾಗ್ ಕ್ರಮವಾಗಿ ಮೂರು, ನಾಲ್ಕು ಮತ್ತು 5ನೇ ಸ್ಥಾನ ಅಲಂಕರಿಸಿದ್ದಾರೆ. ಅದೇನೆ ಇರಲಿ, ಟೂರ್ನಿಯಲ್ಲಿ ಇನ್ನು ಹಲವು ಪಂದ್ಯಗಳು ಬಾಕಿಯಿದ್ದು, ಮತ್ತೆಷ್ಟು ಸಿಕ್ಸ್ಗಳು ದಾಖಲಾಗುತ್ತವೆ ಅನ್ನೋದನ್ನ ಕಾದು ನೋಡಬೇಕಿದೆ.

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ  ನ್ಯೂಸ್ 

Latest Videos
Follow Us:
Download App:
  • android
  • ios