Asianet Suvarna News Asianet Suvarna News

Viral Video: ರಸ್ತೆಯಲ್ಲೇ ಆರು ವರ್ಷದ ಮಗುವಿಗೆ ಸಿಪಿಆರ್‌ ನೀಡಿದ ವೈದ್ಯೆ, ಬದುಕಿಬಂದ ಹುಡುಗ!

ಎಲೆಕ್ಟ್ರಿಕ್‌ ಶಾಕ್‌ನಿಂದ ಕಾರ್ಡಿಯಾಕ್‌ ಅರೆಸ್ಟ್‌ ಆಗಿದ್ದ ಹುಡುಗನನ್ನು ನೋಡಿದ ವೈದ್ಯೆ ತಕ್ಷಣವೇ ಆತನಿಗೆ ನಡುರಸ್ತೆಯಲ್ಲಿಯೇ ಸಿಪಿಆರ್‌ ನೀಡಿದ್ದಾರೆ. ವೈದ್ಯೆಯ ಕ್ಷಿಪ್ರ ಪ್ರತಿಕ್ರಿಯೆ ಕಾರಣದಿಂದಾಗಿ 6 ವರ್ಷದ ಹುಡುಗ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾನೆ.
 

6 Year old Boy electrocuted Andhra doctor swift action saves 6 boys life san
Author
First Published May 18, 2024, 3:57 PM IST

ಹೈದರಾಬಾದ್‌ (ಮೇ.18): ವಿದ್ಯುತ್‌ ಶಾಕ್‌ನಿಂದಾಗಿ ಕಾರ್ಡಿಯಾಕ್‌ ಅರೆಸ್ಟ್‌ಗೆ ತುತ್ತಾಗಿದ್ದ ಹುಡುಗನಿಗೆ ಅತ್ಯಂತ ಕ್ಷಿಪ್ರವಾಗಿ ಸಿಪಿಆರ್‌ ನೀಡುವ ಮೂಲಕ ಆಂಧ್ರ ಪ್ರದೇಶದ ವೈದ್ಯೆ ಆತನ ಜೀವ ಉಳಿಸಲು ಕಾರಣರಾಗಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಜಯವಾಡದ ಅಜಯಪಾ ನಗರದಲ್ಲಿ ಈ ಘಟನೆ ನಡೆದಿದೆ. ವಿದ್ಯುತ್‌ ಸ್ಪರ್ಶದಿಂದ 6 ವರ್ಷದ ಬಾಲಕನಿಗೆ ಹೃದಯ ಸ್ತಂಭನವಾಗಿತ್ತು. ಇನ್ನೇನು ಆತ ಸಾವು ಕಂಡ ಎನ್ನುವಾಗಲೇ ಇದನ್ನು ಗಮನಿಸಿದ ವೈದ್ಯೆ ತಕ್ಷಣವೇ ಸಿಪಿಆರ್‌ ನೀಡಿ ಆತನನ್ನು ಬದುಕಿಸಿದ್ದಾರೆ. ವಿದ್ಯುತ್‌ ಶಾಕ್‌ಗೆ ಒಳಗಾಗಿದದ್ದ 6 ವರ್ಷದ ಬಾಲಕನನ್ನು ಹೆಗಲ ಮೇಲೆ ಹೊತ್ತುಕೊಂಡು ಆತನ ಪೋಷಕರು ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆಯೇ ಆತನಿಗೆ ಕಾರ್ಡಿಯಾಕ್‌ ಅರೆಸ್ಟ್‌ ಆಗಿತ್ತು. ಈ ವೇಳೆ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ವೈದ್ಯ ರಾವಲಿಕಾ ಇದನ್ನು ಗಮನಿಸಿದ್ದಾರೆ. ಪೋಷಕರ ಆತಂಕವನ್ನು ಗಮನಿಸಿದ ಆಕೆ ತಕ್ಷಣವೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಗಮನಿಸಿ ಸಿಪಿಆರ್‌ ನೀಡಿದ್ದಾರೆ.

ವೈದ್ಯೆ ರಾವಾಲಿಕಾ , ತಕ್ಷಣವೇ ಆ ಹುಡುಗನಿಗೆ ರಸ್ತೆಯಲ್ಲೇ ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ಮಾಡಿದ್ದಾರೆ.  ಘಟನೆಯ ವೀಡಿಯೋದಲ್ಲಿ ವೈದ್ಯರು ನಿರಂತರವಾಗಿ ಬಾಲಕನ ಎದೆಗೆ ಗುದ್ದುತ್ತಿರುವುದು ಕಂಡಿದೆ. ಹಲವಾರು ಪ್ರಯತ್ನಗಳ ನಂತರ, ವೈದ್ಯರು 6 ವರ್ಷದ ಮಗುವಿನ ಹೃದಯ ಯಶಸ್ವಿಯಾಗಿ ಬಡಿಯಲು ಆರಂಭಿಸಿದೆ.  ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆ ಬಳಿಕ ಹುಡುಗ ಸಂಪೂರ್ಣವಾಗಿ ಚೇತಿಸಿಕೊಂಡಿದ್ದಾನೆ ಎನ್ನಲಾಗಿದೆ.

ಹೃದಯಾಘಾತದ ಬಳಿಕ ಗಂಟೆಗೂ ಹೆಚ್ಚು ಕಾಲ ನಿಂತಿದ್ದ ಹೃದಯ ಬಡಿತ: ಆದರೂ ವ್ಯಕ್ತಿ ಬದುಕುಳಿದಿದ್ದು ಹೀಗೆ..

ಡಾ. ರಾವಾಲಿಕಾ ಅವರ ತ್ವರಿತ ಮತ್ತು ಅಗತ್ಯ ಕ್ರಮಗಳು ವೈದ್ಯ ಸಮುದಾಯದಿಂದ ವ್ಯಾಪಕ ಮೆಚ್ಚುಗೆ ಗಳಿಸಿದೆ. ಬಾಲಕನ ಪೋಷಕರು ತಮ್ಮ ಮಗನ ಜೀವ ಉಳಿಸಿದ್ದಕ್‌ಕೆ ಡಾ. ರಾವಾಲಿಕಾಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.

ಹೃದಯಾಘಾತವಾದಾಗ ಸಿಪಿಆರ್ ನೀಡಿದರೆ ವ್ಯಕ್ತಿಯನ್ನು ಬದುಕಿಸಬಹುದಾ?


 

Latest Videos
Follow Us:
Download App:
  • android
  • ios