Asianet Suvarna News Asianet Suvarna News

ಚುನಾವಣಾ ಹೊತ್ತಲ್ಲಿ ಹೊಸೂರು ಆಸ್ಪತ್ರೆಗೆ ಬಾಂಬ್ ಬೆದರಿಕೆ!

ಖಾಸಗಿ ಆಸ್ಪತ್ರೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕಳಿಸಿದ ಘಟನೆ ನೆರೆಯ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ. ಆಸ್ಪತ್ರೆ ಸಿಬ್ಬಂದಿ ಕೂಡಲೇ ಒಳ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸಿ ಸಮೀಪದ ಸಿಪ್‌ಕಾಟ್ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

Bomb threat to Hosur hospital during elections time at anekal benglauru rav
Author
First Published May 1, 2024, 7:17 AM IST

ಆನೇಕಲ್‌: ಖಾಸಗಿ ಆಸ್ಪತ್ರೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕಳಿಸಿದ ಘಟನೆ ನೆರೆಯ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ. ಆಸ್ಪತ್ರೆ ಸಿಬ್ಬಂದಿ ಕೂಡಲೇ ಒಳ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸಿ ಸಮೀಪದ ಸಿಪ್‌ಕಾಟ್ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಧಾವಿಸಿ ಬಂದ ಪೊಲೀಸರು ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ಕ್ರಮ ವಹಿಸಿದ್ದರು. ಸತತ 3 ಗಂಟೆಗಳ ತಪಾಸಣೆ ನಂತರ ಯಾವುದೇ ಅಪಾಯಕಾರಿ ವಸ್ತು ಇಲ್ಲವೆಂದು ತಿಳಿಸಿದ್ದಾರೆ.

ಬೆಂಗಳೂರು ಕದಂಬ ಹೋಟೆಲ್‌ಗೆ ಬಾಂಬ್ ಬೆದರಿಕೆ ; ರಾಮೇಶ್ವರಂ ಕೆಫೆಗೂ ಬಾಂಬ್ ಇಟ್ಟಿದ್ದು ನಾನೇ ಎಂದ ಅನಾಮಿಕ!

ಹೊಸೂರಿನ ಮಾರುತಿ ನಗರದಲ್ಲಿ ಮಿತ್ರ ಲೀಲಾ(Mitra leela hospital) ಎಂಬ ಖಾಸಗಿ ಮಕ್ಕಳ ಆಸ್ಪತ್ರೆಯಿದ್ದು ಡಿಎಂಕೆ ಪಕ್ಷದ ನವೀನ್ ಕುಮಾರ್(DMK party Naveen kumar ) ಒಡೆತನದ್ದಾಗಿದೆ. ಮಂಗಳವಾರ ಬೆಳಗ್ಗೆ 11.30ಕ್ಕೆ ಆಸ್ಪತ್ರೆಯ ಇ-ಮೇಲ್ ಐಡಿಗೆ ಬೆದರಿಕೆ ಬಂದಿದ್ದು, ಆಸ್ಪತ್ರೆಯಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳಿವೆ. ಅದು ಯಾವುದೇ ನಿಮಿಷದಲ್ಲಿ ಸ್ಫೋಟಗೊಳ್ಳುತ್ತದೆ ಎಂದು ಇ-ಮೇಲ್‌ನಲ್ಲಿ ಬರೆದಿದ್ದರು.

ಮಹದೇವ ಬೆಟ್ಟಿಂಗ್ ಆಪ್ ಹಗರಣ : ಎಕ್ಸ್‌ಕ್ಯೂಸ್‌ ಮಿ ನಟ ಸಾಹಿಲ್ ಖಾನ್ ಬಂಧನ

ಇನ್‌ಸ್ಪೆಕ್ಟರ್ ಪ್ರಕಾಶ್ ಮತ್ತು ಪೊಲೀಸರ ತಂಡ ಆಸ್ಪತ್ರೆ ಆವರಣದಲ್ಲಿ ಶೋಧ ಮುಂದುವರಿಸಿದ್ದಾರೆ. ಇದೇ ಮಾದರಿಯ ಇ-ಮೇಲ್ ದೇಶದ 64 ಆಸ್ಪತ್ರೆಗಳಿಗೆ ಹೋಗಿದ್ದು, ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಹಾಗೂ ಉನ್ನತ ಅಧಿಕಾರಿಗಳು ಭೇಟಿ ನೀಡಿದ್ದರು.

ಬಾಂಬ್ ಸ್ಫೋಟ ಸುದ್ದಿ ಕೆಲ ಕಾಲ ಹೊಸೂರು ಪಟ್ಟಣವನ್ನೇ ಭಯ ಭೀತಗೊಳಿಸಿತ್ತು. ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು ಎಂದು ಪೊಲೀಸ್‌ ವರಿಷ್ಠ ಅಧಿಕಾರಿ ಬಾಬು ಪ್ರಶಾಂತ್‌ ತಿಳಿಸಿದ್ದಾರೆ.

Follow Us:
Download App:
  • android
  • ios