Asianet Suvarna News Asianet Suvarna News

ನಮೋ ಕಾಶಿ ಯಾತ್ರೆ: ನಾಳೆ ವಾರಾಣಸಿಯಲ್ಲಿ ಪ್ರಧಾನಿ ನಾಮಪತ್ರ: ಈ ಬಾರಿಯೂ ಭಾರೀ ಅಂತರದಿಂದ ಗೆಲ್ತಾರಾ ಮೋದಿ..?

ಕಾಶಿಪುರ ಇಂದು ಏನಾದರೂ ವೈಭೋಗದಿಂದ ಕಂಗೊಳಿಸ್ತಿದೆ ಅಂದ್ರೆ, ಅದಕ್ಕೆ ಕಾರಣ ಪಿಎಂ ಮೋದಿ ಅನ್ನೊದ್ರಲ್ಲಿ ಎರಡು ಮಾತಿಲ್ಲ. ಈಗ ಇದೇ ಕ್ಷೇತ್ರದಿಂದ ನಮೋ ಲೋಕಸಮರಕ್ಕೆ ಸಿದ್ಧರಾಗಿದ್ದಾರೆ.  ಈ ಬಗ್ಗೆ ಒಂದು ರಿಪೋರ್ಟ್

ಕಾಶಿ.. ಅರ್ಥಾತ್ ವಾರಣಾಸಿ. ವಿಶ್ವನಾಥ ನೆಲೆಸಿರುವ ಪುಣ್ಯಧಾಮ. ಗಂಗೆಯ ದಡದಲ್ಲಿರುವ ಪವಿತ್ರ ಕ್ಷೇತ್ರ.. ಪುರಾಣದ ಅದೆಷ್ಟೋ ಕಥೆಗಳಲ್ಲಿ ಕಾಶಿಯ ಉಲ್ಲೇಖವನ್ನ ನೋಡಬಹುದು. ಹಿಂದೂಗಳಿಗೆ ಪವಿತ್ರ ಕ್ಷೇತ್ರವಾಗಿರುವ ಈ ಕಾಶಿಗೂ ಪಿಎಂ ಮೋದಿಗೂ ಎಲ್ಲಿಲ್ಲದ ನಂಟು.  :ಕಾಶಿಪುರ ಇಂದು ಏನಾದರೂ ವೈಭೋಗದಿಂದ ಕಂಗೊಳಿಸ್ತಿದೆ ಅಂದ್ರೆ, ಅದಕ್ಕೆ ಕಾರಣ ಪಿಎಂ ಮೋದಿ ಅನ್ನೊದ್ರಲ್ಲಿ ಎರಡು ಮಾತಿಲ್ಲ. 2014ರಲ್ಲಿ ಪಿಎಂ ಮೋದಿ ಇದೇ ಕಾಶಿಯಿಂದ ಸ್ಪರ್ಧಿಸಿ ಭರ್ಜರಿಯಾಗಿ ಗೆದ್ದು ಬೀಗಿದ್ದರು. ಇವರ ವಿಜಯದ ಪಯಣ 2019ರಲ್ಲೂ ಮುಂದುವರೆದಿತ್ತು. ಈಗ ಮತ್ತೆ ಲೋಕ ಸಮರದ ಅಖಾಡಕ್ಕೆ ಇಳಿಯಲು ನಿರ್ಧರಿಸಿದ್ದು ಅದಕ್ಕಾಗಿ ಸಕಲ ಸಿದ್ದತೆಗಳನ್ನೂ ಮಾಡಿಕೊಂಡಿದ್ದಾರೆ. ಹೀಗಿರುವಾಗ ಸುವರ್ಣನ್ಯೂಸ್ ರಿಪೋರ್ಟರ್ ಶಶಿಶೇಖರ್ ಗ್ರೌಂಡ್ ರಿರ್ಪೊಟಿಂಗ್ ಮಾಡಿದ್ದಾರೆ. ಅಲ್ಲಿನ ನಿಜ ಚಿತ್ರಣ ಹೇಗಿದೆ ಅನ್ನೋದನ್ನ ಈ ವೀಡಿಯೋದಲ್ಲಿ ನೋಡಿ.. 

Video Top Stories