Asianet Suvarna News Asianet Suvarna News

ಲೋಕಸಭಾ ಚುನಾವಣೆ 2024: ಮತಯುದ್ಧದ ಹೊತ್ತಲ್ಲಿ ಪರಿಹಾರದ ಸಂಗ್ರಾಮ..! ಯಾರಿಗೆ ವರವಾಗುತ್ತೆ ಬರ ಪರಿಹಾರ..?

ರಾಷ್ಟ್ರದಲ್ಲೀಗ ಚುನಾವಣಾ ಸುನಾಮಿ ಎದ್ದಿದೆ. ಮತದಾರ ಯಾವ ಪಕ್ಷಕ್ಕೆ ಒಲಿಯಬೇಕು ಅನ್ನೋದನ್ನ ಆಲ್ ಮೋಸ್ಟ್ ಡಿಸೈಡ್ ಮಾಡಿದ್ದಾಗಿದೆ. ರಾಜ್ಯದಲ್ಲಿ ಇನ್ನೆರಡು ದಿನಗಳಲ್ಲಿ ಚುನಾವಣೆಯೂ ನಡೆದುಹೋಗಲಿದೆ. ಅದರ ಮಧ್ಯೆ, ಈಗ ಬರ ಪರಿಹಾರದ ಕುರಿತಾಗಿ ಸುಪ್ರೀಂ ಕೋರ್ಟ್ ಅಖಾಡ ಪ್ರವೇಶಿಸಿದೆ. 

ಬೆಂಗಳೂರು(ಏ.24):  ಮತಯುದ್ಧದ ಹೊತ್ತಲ್ಲಿ ಶುರುವಾಗಿದೆ ಪರಿಹಾರದ ಸಂಗ್ರಾಮ. ಇನ್ನೊಂದು ವಾರದಲ್ಲಿ ರಾಜ್ಯಕ್ಕೆ ಹರಿದು ಬರುತ್ತಾ ಬರ ಪರಿಹಾರ? ರಾಜ್ಯ ಸರ್ಕಾರ ಕೇಳಿದ್ದೇನು.? ಸುಪ್ರೀಂ ಕೋರ್ಟ್‌ನಲ್ಲಿ ಆಗಿದ್ದೇನು? ಮೋದಿ ಸರ್ಕಾರ ಹೇಳಿದ್ದೇನು? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರವೇ ಇವತ್ತಿನ ಸುವರ್ಣ ಫೋಕಸ್, ಪರಿಹಾರ ಪಾಲಿಟಿಕ್ಸ್...

ಸುಪ್ರೀಂ ಕೋರ್ಟ್ ತೀರ್ಪನ್ನ ರಾಜ್ಯ ಸರ್ಕಾರ ತನ್ನದೇ ಗೆಲುವು, ಮೋದಿ ಸರ್ಕಾರದ ಸೋಲು ಅಂತ ಹೇಳ್ತಾ ಇದೆ. ಆದ್ರೆ ಮೋದಿ ಸೇನೆ ಇದರ ಬಗ್ಗೆ ಕೊಡ್ತಾಯಿರುವ ಹೇಳಿಕೆ, ಬೇರೆಯದೇ ಕತೆ ಹೇಳ್ತಾ ಇದೆ. ಅಸಲಿಗೆ, ಈ ಪರಿಹಾರದ ಪಾಲಿಟಿಕ್ಸ್ ಹಿಂದಿರೋ ಅಸಲಿ ಮಿಸ್ಟರಿ ಏನು?. ಇಲ್ಲಿದೆ ಉತ್ತರ 

ನನ್ನ ವೋಟು ನನ್ನ ಮಾತು: ಉಡುಪಿ- ಚಿಕ್ಕಮಗಳೂರು ಮತದಾರರ ಒಲವು ಯಾವ ಕಡೆ?

ರಾಷ್ಟ್ರದಲ್ಲೀಗ ಚುನಾವಣಾ ಸುನಾಮಿ ಎದ್ದಿದೆ. ಮತದಾರ ಯಾವ ಪಕ್ಷಕ್ಕೆ ಒಲಿಯಬೇಕು ಅನ್ನೋದನ್ನ ಆಲ್ ಮೋಸ್ಟ್ ಡಿಸೈಡ್ ಮಾಡಿದ್ದಾಗಿದೆ. ರಾಜ್ಯದಲ್ಲಿ ಇನ್ನೆರಡು ದಿನಗಳಲ್ಲಿ ಚುನಾವಣೆಯೂ ನಡೆದುಹೋಗಲಿದೆ. ಅದರ ಮಧ್ಯೆ, ಈಗ ಬರ ಪರಿಹಾರದ ಕುರಿತಾಗಿ ಸುಪ್ರೀಂ ಕೋರ್ಟ್ ಅಖಾಡ ಪ್ರವೇಶಿಸಿದೆ. 

ಕೇಂದ್ರ ಸರ್ಕಾರ ಬರ ಪರಿಹಾರ ಕೊಡ್ತೀನಿ ಅಂತ ಹೇಳಿದೆ. ರಾಜ್ಯ ಸರ್ಕಾರ, ಇದು ನಮ್ಮ ಹೋರಾಟಕ್ಕೆ ಸಂದ ಜಯ ಅಂತ ಹೆಮ್ಮೆಯಿಂದ ಹೇಳ್ತಾ ಇದೆ. ಆದ್ರೆ, ನಿಜಕ್ಕೂ ಇಲ್ಲಿ ಆಗಿರೋದೇನು? ಅಸಲಿಗೆ ಗೆದ್ದಿದ್ಯಾರು..?
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಕೇಂದ್ರದಿಂದ ಬರ ಪರಿಹಾರ ತರಿಸಿಕೊಳ್ಳೋಕೆ ಶತ ಪ್ರಯತ್ನ ನಡೆಸ್ತಾ ಇದೆ. ಕೇಂದ್ರ ಸರ್ಕಾರ ಇನ್ನೊಂದು ವಾರದಲ್ಲಿ ಪರಿಹಾರ ಕೊಡ್ತೀನಿ ಅನ್ನೋ ಸುಳಿವನ್ನೂ ನೀಡಿದೆ. ಅಲ್ಲಿಗೆ ಸಮಸ್ಯೆ ಪರಿಹಾರವಾಯ್ತಾ..? ಈಗ ಈ ಇಬ್ಬರಲ್ಲಿ ಗೆದ್ದವರ್ಯಾರು? ಅಂತೂ ಇಂತೂ ಬರ ಪರಿಹಾರ ಸಿಗೋ ಸುಳಿವಂತೂ ಸಿಕ್ಕಾಗಿದೆ. ಅದರಿಂದ ರಾಜ್ಯದಲ್ಲಿ ಅದೆಂಥಾ ರಾಜಕೀಯ ತಿರುವು ಸಿಗಲಿದೆಯೋ ಕಾಲವೇ ಉತ್ತರಿಸಲಿದೆ.

Video Top Stories