Asianet Suvarna News Asianet Suvarna News

ಸೂರಿ 'ಕಾಗೆ ಬಂಗಾರ'ಕ್ಕೆ ಮುಹೂರ್ತ ಫಿಕ್ಸ್: ಚಿತ್ರಕ್ಕೆ ದುನಿಯಾ ವಿಜಯ್ ಮಗಳು ನಾಯಕಿ!

ಕಾಗೆ ಬಂಗಾರ ಸಿನಿಮಾ ಆರಂಭ ಆಗುತ್ತಿದೆ. ಈ ಚಿತ್ರಕ್ಕೆ ನಾಯಕ ನಾಯಕಿ ಕೂಡ ಫೈನಲ್ ಆಗಿದ್ದಾರೆ. ಸೂರಿ ಅಭಿಮಾನಿಗಳು ಬಹಳ ವರ್ಷಗಳಿಂದ ಕಾಯುತ್ತಿರೋ ಸಿನಿಮಾ ಇದು. 
 

ನಿರ್ದೇಶಕ ದುನಿಯಾ ಸೂರಿ ಬಹಳ ವರ್ಷಗಳಿಂದ 'ಕಾಗೆ ಬಂಗಾರ' ಅನ್ನೋ ಸಿನಿಮಾ ಮಾಡೋದಾಗಿ ಹೇಳುತ್ತಲೇ ಬರುತ್ತಿದ್ರು. ಟೈಟಲ್​​ನಿಂದಲೇ ಈ ಸಿನಿಮಾ ಬಗ್ಗೆ ಭಾರಿ ಟಾಕ್ ಆಗಿತ್ತು. ಆದ್ರೆ ಕಾಗೆ ಬಂಗಾರ ಶುರುವಾಗಿರಲಿಲ್ಲ. ಭಟ್ ಈಗ ಕಾಗೆ ಬಂಗಾರಕ್ಕೆ ಒಂದು ರೂಪ ಸಿಗಲಿದೆ. ಯಾಕಂದ್ರೆ ಕಾಗೆ ಬಂಗಾರ ಸಿನಿಮಾ ಆರಂಭ ಆಗುತ್ತಿದೆ. ಈ ಚಿತ್ರಕ್ಕೆ ನಾಯಕ ನಾಯಕಿ ಕೂಡ ಫೈನಲ್ ಆಗಿದ್ದಾರೆ. ಸೂರಿ ಅಭಿಮಾನಿಗಳು ಬಹಳ ವರ್ಷಗಳಿಂದ ಕಾಯುತ್ತಿರೋ ಸಿನಿಮಾ ಇದು. ಮುಂದಿನ ತಿಂಗಳು ಕಾಗೆ ಬಂಗಾರ ಸಿನಿಮಾಕ್ಕೆ ಮಹೂರ್ಥ ನಡೆಯಲಿದೆ. ಈ ಕಾಗೆ ಬಂಗಾರಕ್ಕೆ ನಾಯಕ ನಾಯಕಿ ಕೂಡ ಆಯ್ಕೆ ಆಗಿದ್ದಾರೆ. ಸೂರಿಯ ಈ ಕಾಗೆ ಬಂಗಾರದಲ್ಲಿ ಹೀರೋ ಆಗಿ ಕಿಸ್ ಸಿನಿಮಾದ ಸ್ಟಾರ್ ವಿರಾಟ್​ ನಟಿಸುತ್ತಿದ್ದಾರೆ. 

ಮತ್ತೊಂದು ಇಂಟ್ರೆಸ್ಟಿಂಗ್ ಅಂದ್ರೆ ನಾಯಕಿಯಾಗಿ ನಟ ದುನಿಯಾ ವಿಜಯ್ ಮಗಳು ರಿತನ್ಯಾ ಅಭಿನಯಿಸುತ್ತಿದ್ದಾರೆ. ಸೂರಿಯ ಕಾಗೆ ಬಂಗಾರಲ್ಲಿ ದುನಿಯಾ ವಿಜಯ್ ಮೊದಲ ಮಗಳು ರಿತನ್ಯಾ ನಾಯಕಿ ಅನ್ನೋದು ಈಗ ಸ್ಯಾಂಡಲ್​ವುಡ್​​ನಲ್ಲಿ ಟಾಕ್​ ಆಫ್​ ದಿ ಟೌನ್. ಇಂಟ್ರೆಸ್ಟಿಂಗ್ ಅಂದ್ರೆ ನಟ ದುನಿಯಾ ವಿಜಯ್​ರನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದು ಕೂಡ ಇದೇ ಸೂರಿ. ದುನಿಯಾ ಸಿನಿಮಾದಲ್ಲಿ ವಿಜಯ್​​ಗೆ ಸ್ಟಾರ್​ಗಿರಿ ತಂದು ಕೊಟ್ರು. ಈಗ ವಿಜಯ್ ಮಗಳು ರಿತನ್ಯಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ವಿಜಯ್ ಪುತ್ರಿ ರಿತನ್ಯಾ ಸಿನಿಮಾ ರಂಗಕ್ಕೆ ಪರಿಚಯ ಆಗೋ ಮೊದಲು ಮೋನಿಕಾ ಎಂದು ಹೆಸರಿತ್ತು. 

ಆದ್ರೆ ಈಗ ರಿತನ್ಯಾ ಎಂದು ಮರು ನಾಮಕರಣ ಮಾಡಿಕೊಂಡಿದ್ದಾರೆ. ಈ ಹೆಸರು ಬಂದ ಮೇಲೆ ವಿಜಯ್ ಪುತ್ರಿಗೆ ಭಾರಿ ಆಫರ್​ಗಳು ಬರುತ್ತಿವೆ. 9 ವರ್ಷಗಳ ಹಿಂದೆ ಸೂರಿ 'ಕೆಂಡಸಂಪಿಗೆ' ಸಿನಿಮಾ ಮಾಡಿ ಗೆದ್ದಿದ್ದ ಸೂರಿ ಈ ಚಿತ್ರದ ಪ್ರೀಕ್ವೆಲ್ ಹಾಗೂ ಸೀಕ್ವೆಲ್ ಮಾಡುವುದಾಗಿ ಹೇಳಿದ್ರು. ಪ್ರೀಕ್ವೆಲ್ ಕಥೆಗೆ 'ಕಾಗೆ ಬಂಗಾರ' ಎನ್ನುವ ಟೈಟಲ್ ಫಿಕ್ಸ್ ಮಾಡಿದ್ರು. ಸೀಕ್ವೆಲ್ ಗೆ 'ಬ್ಲ್ಯಾಕ್ ಮ್ಯಾಜಿಕ್' ಎಂದು ಟೈಟಲ್​ ಇಟ್ಟಿದ್ರು. ಆದ್ರೆ 'ಕಾಗೆ ಬಂಗಾರ' ಸಿನಿಮಾ ತಡವಾಗುತ್ತಲೇ ಇತ್ತು. ಈಗ ಸಿನಿಮಾ ಆರಂಭ ಆಗುತ್ತಿದೆ. ಈ ಸಿನಿಮಾವನ್ನ ಜಯಣ್ಣ ಕಂಬೈನ್ಸ್ ಬ್ಯಾನರ್ನಲ್ಲಿ ಜಯಣ್ಣ ಬೋಗೇಂಧ್ರ ನಿರ್ಮಾಣ ಮಾಡುತ್ತಿದ್ದಾರೆ. 

Video Top Stories