Asianet Suvarna News Asianet Suvarna News

IPL 2024 ವಾಂಖೇಡೆ ಮೈದಾನದಲ್ಲಿಂದು ಮುಂಬೈ-ಕೆಕೆಆರ್ ಹೈವೋಲ್ಟೇಜ್ ಫೈಟ್

ಮುಂಬೈಗೆ ಕೋಲ್ಕತಾ ಸೇರಿ ಒಟ್ಟು 4 ಪಂದ್ಯ ಬಾಕಿಯಿದೆ. ಎಲ್ಲರದಲ್ಲೂ ಗೆದ್ದರೂ ತಂಡ ಪ್ಲೇ-ಆಫ್‌ಗೇರುವ ಸಾಧ್ಯತೆ ಕಡಿಮೆ. ಬುಮ್ರಾ(14 ವಿಕೆಟ್‌), ಕೋಟ್ಜೀ(13 ವಿಕೆಟ್‌) ಹಾಗೂ ಯುವ ಬ್ಯಾಟರ್‌ ತಿಲಕ್‌ ವರ್ಮಾ (343 ರನ್) ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ತಂಡವಾಗಿ ಆಟವಾಡಲು ಮುಂಬೈ ವಿಫಲವಾಗಿದೆ.

IPL 2024 Mumbai Indians take on Kolkata Knight Riders Challenge in Wankhede Stadium kvn
Author
First Published May 3, 2024, 12:14 PM IST

ಮುಂಬೈ(ಮೇ.03): ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಸೋತು ಪ್ಲೇ-ಆಫ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಶುಕ್ರವಾರ ಕೋಲ್ಕತಾ ವಿರುದ್ಧ ಸೆಣಸಾಡಲಿದೆ. ತಂಡಕ್ಕೆ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದ್ದು, ಸೋತರೆ ರೇಸ್‌ನಿಂದ ಹೊರಬೀಳುವುದು ಖಚಿತ. ಕೋಲ್ಕತಾ ನೈಟ್ ರೈಡರ್ಸ್‌ ಗೆದ್ದರೆ ಪ್ಲೇಆಫ್‌ಗೆ ಮತ್ತಷ್ಟು ಹತ್ತಿರವಾಗಲಿದೆ.

ಮುಂಬೈಗೆ ಕೋಲ್ಕತಾ ಸೇರಿ ಒಟ್ಟು 4 ಪಂದ್ಯ ಬಾಕಿಯಿದೆ. ಎಲ್ಲರದಲ್ಲೂ ಗೆದ್ದರೂ ತಂಡ ಪ್ಲೇ-ಆಫ್‌ಗೇರುವ ಸಾಧ್ಯತೆ ಕಡಿಮೆ. ಬುಮ್ರಾ(14 ವಿಕೆಟ್‌), ಕೋಟ್ಜೀ(13 ವಿಕೆಟ್‌) ಹಾಗೂ ಯುವ ಬ್ಯಾಟರ್‌ ತಿಲಕ್‌ ವರ್ಮಾ (343 ರನ್) ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ತಂಡವಾಗಿ ಆಟವಾಡಲು ಮುಂಬೈ ವಿಫಲವಾಗಿದೆ. ಹೀಗಾಗಿ ಆಕ್ರಮಣಕಾರಿ ಆಟವಾಡುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸುಧಾರಿತ ಪ್ರದರ್ಶನ ತೋರಿದರಷ್ಟೇ ಮುಂಬೈಗೆ ಗೆಲುವು ದಕ್ಕಲಿದೆ.

ಭಾರತ ತಂಡದಿಂದ ಕೆ ಎಲ್ ರಾಹಲ್‌ ಕೈಬಿಟ್ಟಿದ್ದೇಕೆ? ಕೊನೆಗೂ ಮೌನ ಮುರಿದ ಅಜಿತ್ ಅಗರ್ಕರ್, ರೋಹಿತ್ ಶರ್ಮಾ

ಅತ್ತ ಕೆಕೆಆರ್‌ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿದ್ದು, ಪ್ಲೇ-ಆಫ್‌ಗೇರುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಈ ಪಂದ್ಯದಲ್ಲೂ ಗೆದ್ದು ಅಗ್ರ-2ರಲ್ಲೇ ಉಳಿದುಕೊಳ್ಳುವುದು ತಂಡದ ಗುರಿ. ಆದರೆ ಬೌಲಿಂಗ್‌ ವಿಭಾಗ ಮೊನಚು ಕಳೆದುಕೊಂಡಿರುವುದು ಫ್ರಾಂಚೈಸಿಯ ತಲೆನೋವಿಗೆ ಕಾರಣವಾಗಿದೆ. ಪ್ರಮುಖವಾಗಿ ಮಿಚೆಲ್ ಸ್ಟಾರ್ಕ್‌ ತನ್ನ ಮೌಲ್ಯಕ್ಕೆ ತಕ್ಕ ಪ್ರದರ್ಶನ ನೀಡಬೇಕಿದೆ.

ಮುಂಬೈ ಇಂಡಿಯನ್ಸ್ ಬೌಲರ್‌ಗಳಿಗೆ ಫಿಲ್ ಸಾಲ್ಟ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್ ಹಾಗೂ ರಿಂಕು ಸಿಂಗ್ ಅವರನ್ನು ಕಟ್ಟಿಹಾಕಬೇಕಾದ ಸವಾಲು ಸುಲಭವೇನಲ್ಲ. ಇನ್ನು ವರುಣ್ ಚಕ್ರವರ್ತಿ, ವೈಭವ್ ಅರೋರ ಮುಂಬೈ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

IPL 2024 ರಾಜಸ್ಥಾನ ರಾಯಲ್ಸ್‌ ವಿರುದ್ಧ ಕೊನೆ ಬಾಲ್‌ ಥ್ರಿಲ್ಲರ್‌ ಗೆದ್ದ ಸನ್‌ರೈಸರ್ಸ್ ಹೈದರಾಬಾದ್!

ಒಟ್ಟು ಮುಖಾಮುಖಿ: 32

ಕೆಕೆಆರ್‌: 09

ಮುಂಬೈ: 23

ಸಂಭವನೀಯರ ಪಟ್ಟಿ

ಕೆಕೆಆರ್‌: ಫಿಲ್ ಸಾಲ್ಟ್‌, ಸುನಿಲ್ ನರೈನ್‌, ವೆಂಕಟೇಶ್‌ ಅಯ್ಯರ್, ಶ್ರೇಯಸ್‌ ಅಯ್ಯರ್(ನಾಯಕ), ಆಂಡ್ರೆ ರಸೆಲ್‌, ರಿಂಕು ಸಿಂಗ್, ರಮನ್‌ದೀಪ್‌ ಸಿಂಗ್, ಮಿಚೆಲ್ ಸ್ಟಾರ್ಕ್‌, ವೈಭವ್‌ ಅರೋರ, ಚೇತನ್‌ ಸಕಾರಿಯ, ವರುಣ್‌ ಚಕ್ರವರ್ತಿ.

ಮುಂಬೈ: ರೋಹಿತ್‌ ಶರ್ಮಾ, ಇಶಾನ್‌ ಕಿಶನ್, ತಿಲಕ್‌ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್‌ ಪಾಂಡ್ಯ(ನಾಯಕ), ಟಿಮ್‌ ಡೇವಿಡ್, ನೇಹಲ್ ವದೇರಾ, ಮೊಹಮದ್ ನಬಿ, ಗೆರಾಲ್ಡ್ ಕೋಟ್ಜೀ, ಜಸ್ಪ್ರೀತ್ ಬುಮ್ರಾ, ಪೀಯುಷ್ ಚಾವ್ಲಾ.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಜಿಯೋ ಸಿನಿಮಾ

Follow Us:
Download App:
  • android
  • ios